Showing posts with label kannada chitrageethe. Show all posts
Showing posts with label kannada chitrageethe. Show all posts

Saturday, March 2, 2013

Maayadanta male bantanna


ಮಾಯದಂಥ ಮಳೆ ಬಂತಣ್ಣ
ಮದಗಾದ ಕೆರೇಗೆ
ಅಂಗೈನಷ್ಟು ಮೋಡನಾಗಿ
ಭೂಮಿತೂಕದ ಗಾಳಿ ಬೀಸಿ
ಗುಡಗಿ ಗೂಡಾಗಿ ಚೆಲ್ಲಿದಳು
ಗಂಗಮ್ಮ ತಾಯಿ ||
ಏರಿ ಮ್ಯಾಗಳ ಬಲ್ಲಾಳುರಾಯ
ಕೆರೆಯ ಬಳಗರ ಬೆಸ್ತರ ಹುಡುಗ
ನೀವೋಡಿ ಓಡಿ ಸುದ್ದಿಯ ಕೊಡಿರಯ್ಯೋ
ನಾನಿಲುವಳಲ್ಲ
||ಮಾಯದಂತ ಮಳೆ||
ಆರು ಸಾವಿರ ಒಡ್ಡರ ಕರಸಿ
ಮೂರು ಸಾವಿರ ಗುದ್ದಲಿ ತರಸಿ
ಸೋಲು ಸೋಲಿಗೆ ಮಣ್ಣನ್ ಹಾಕಿಸಯ್ಯೋ
ನಾನಿಲುವಳಲ್ಲ
||ಮಾಯದಂತ ಮಳೆ||
ಆರು ಸಾವಿರ ಕುರಿಗಳ ತರಿಸಿ
ಮೂರು ಸಾವಿರ ಕುಡುಕೋಲ್ ತರಿಸಿ
ಕಲ್ಲು ಕಲ್ಲಿಗೆ ರೈತವ ಬಿಡಿಸಯ್ಯೋ
ನಾ ನಿಲುವಳಲ್ಲ
||ಮಾಯದಂತ ಮಳೆ||
ಒಂದು ಬಂಡಿಲಿ ವೀಳೆದೆಡೆಕೆ
ಒಂದು ಬಂಡಿಲಿ ತಿಗಳಿತಮಟಾ
ಮೂಲೆ ಮೂಲೆಗೆ ಗಂಗಮ್ನ ಮಾಡಿಸಯ್ಯೋ
ನಾ ನಿಲುವಳಲ್ಲ
||ಮಾಯದಂತ ಮಳೆ||

Nee Hinga Nodabyada nanna


ನೀ ಹಿಂಗ ನೋಡಬ್ಯಾಡ ನನ್ನ,
ನೀ ಹಿಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ||ಪ||

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ,
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ, ಎಲ್ಲಿ ಆಚೆಯಾ ದಂಡಿ
...ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ,
ನಾ ತಡಿಲಾರೆ ಅದು, ಯಾಕ ನೋಡತೀ, ಮತ್ತ ಮತ್ತ ನೀ ಇತ್ತ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ,
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ?
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು, ಮಾರೀಗೆ ಮಾರಿಯ ರೀತಿ,
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ಧಾರೀಲೆ ನೆನೆದ ಕೈಹಿಡಿದೆ ನೀನು ತಣ್ಣsಗ ಅಂತನ ತಿಳಿದು
ಬಿಡವೊಲ್ಲಿ ಇನ್ನೂನೂ ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲ ಎಲ್ಲನ್ನs
ಆ ಗಾದಿಮಾತು ನಂಬಿ, ನಾನು ದೇವರಂತ ತಿಳಿದೆಯೇನ ನೀ ನನ್ನ

ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ, ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣಿಮಿ ಚಂದಿರನ ಹೆಣಾ ಬಂತೋ ಮುಗಿಲಾಗ ತೇಲತಾ ಹಗಲ!

ನಿನ್ನ ಕಣ್ಣಿನಾಗ ಕಾಲೂರಿ ಮಳೆಯು, ನಡನಡಕ ಹುಚ್ಚು ನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ,
ಅತ್ತರೆ ಅತ್ತು ಬಿಡು, ಹೊನಲು ಬರಲಿ, ನಕ್ಯಾಕ ಮರಸತಿ ದುಕ್ಕ?
ಎಲೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿ ಕಚ್ಚಿ ಹಿಡಿಯದಿರು ಬಿಕ್ಕ.

Ede tumbi hadidenu andu naanu


ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ ಅದುವೇ ಬಹುಮಾನ
ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ...

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ....

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು...

Deepavu ninnade Galiyu ninnade


ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
(ಬೆಟ್ಟವು ನಿನ್ನದೆ ಬಯಲೂ ನಿನ್ನದೆ
ಹಬ್ಬಿನದಲಿ ಪ್ರೀತಿ) - ೨
ನೆಳಲೋ ಬಿಸಿಲೋ ಎಲ್ಲವೂ ನಿನ್ನವೆ - ೨
ಇರಲಿ ಏಕ ರೀತಿ
ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
(ಆಗೊಂದು ಸಿಡಿಲು ಈಗೊಂದು ಮುಗಿಲು
ನಿನಗೆ ಅಲಂಕಾರ) - ೨
ಅಲ್ಲೊಂದು ಹಕ್ಕಿಇಲ್ಲೊಂದು ಮುಗುಳು - ೨
ನಿನಗೆ ನಮಸ್ಕಾರ
ಕಡಲೂ ನಿನ್ನದೆ ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ ಈ ಭಾವ ಗೀತೆ - ೨
ನಿನ್ನ ಪದಧ್ವನಿ
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ ಹಡಗೂ ನಿನ್ನದೆ
ಮುಳುಗದಿರಲಿ ಬದುಕು...

Bettada Hoo



ಚಿತ್ರ : ಬೆಟ್ಟದ ಹೂ


ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
"ಎಲ್ಲಿ ಇನ್ನೊಂದು ಸಲ ಹೇಳು"
ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
ಸನ್‌ಲೈಟ್ ಲೇಟ್ ಕಮ್...
ರೇನ್ ಲೇಟ್ ಇಟ್ ಕಮ್...
ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್...
ಶೆರ್ಲಿ ಮೇಡಮ್-ಗಾಗಿ ಕೊಡಲು
ಬೆಟ್ಟದ ಹೂವ ತರುವೆ...
ಶೆರ್ಲಿ ಮೇಡಮ್ ಟು ಗಿವಿಂಗ್
ಮೌಂಟನ್ ಫ್ಲವರ್ ಬ್ರಿಂಗಿಂಗ್...
ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
ಸನ್‌ಲೈಟ್ ಲೇಟ್ ಕಮ್...
ರೇನ್ ಲೇಟ್ ಇಟ್ ಕಮ್...
ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್...
ಹ ಹ ಹ ಹ ಹ ಹಾ...
ಪಾಮ್ ಪಾಮ್ ಪಾಮ್ ಪಾಮ್... ಪೋ ಪೋ ಪಾಮ್...
(ದಿನವೂ ಹೂವಾ ಕೊಡುವೆ...
ಝಣ ಝಣ ರೂಪಾಯಿ ಪಡೆವೆ...) - 2
ಅಮ್ಮನ ಕೈಲಿ ಎಲ್ಲ ಕೊಟ್ಟು
ಹತ್ತೇ ಪೈಸಾ ತೆಗೆದುಕೊಳ್ಳುವೆ...
"ವೇಟ್ ವನ್ ಮಿನಿಟ್... ಐ ಟೆಲ್ ಕರೆಕ್ಟ್!"
ಹಾ... ಹಾ...
(ಡೈಲೀ ಫ್ಲವರ್ ಗಿವಿಂಗ್...
ಟಣ್ ಟಣ್ ರುಪೀಸ್ ಟೇಕಿಂಗ್...) - 2
ಆಲ್ ದಿ ಮನೀ ಮದರ್ ಕೀಪಿಂಗ್...
ಟೆನ್ ಪೈ ಓನ್ಲೀ ಐ ರಿಸೀವಿಂಗ್...
ಬಿಸಿಲೇ ಇರಲೀ...
ಸನ್‌ಲೈಟ್ ಲೇಟ್ ಕಮ್, ಕಮ್...
ಮಳೆಯೇ ಬರಲೀ...
ರೇನ್ ಲೇಟ್ ಇಟ್ ಕಮ್...
ಕಾಡಲ್ಲಿ ಮೇಡಲ್ಲಿ ಅಲೆವೆ... ಹ ಹ ಹ ಹಾಂ...
ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್...
(ಹಣವನು ಸೇರಿಸಿ ಇಡುವೆ...
ದಿನವೂ ಎಣಿಸುತಲಿರುವೆ...) - 2
ಹತ್ತು ರೂಪಾಯಿ ಕೂಡಿದ ಮೇಲೆ
ರಾಮಾಯಣದ ಪುಸ್ತಕ ಕೊಳುವೆ
"ವೆರಿ ವೆರಿ ಡಿಫಿಕಲ್ಟ್ ಪ್ರಾಬ್ಲಮ್... ಟೂ ಮೆನೀ ವರ್ಡ್ಸ್... ವೇಟ್, ವನ್ ಮಿನಿಟ್. ಹಾನ್... "
(ಮನೀ ಮನೀ ಐ ವಿಲ್ ಕಲೆಕ್ಟಿಂಗ್...
ಡೈಲೀ ಡೈಲೀ ಕೌಂಟಿಂಗ್) - 2
ಟೆನ್ ರುಪೀಸ್ ಆಫ್ಟರ್ ಜಾಯ್ನಿಂಗ್
ರಾಮಾಯಣ್ ಬುಕ್ ಪರ್‌ಚೇಸಿಂಗ್...
ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
ಸನ್‌ಲೈಟ್ ಲೇಟ್ ಕಮ್...
ರೇನ್ ಲೇಟ್ ಇಟ್ ಕಮ್...
ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್, ರೋಮಿಂಗ್...
ಶೆರ್ಲಿ ಮೇಡಮ್-ಗಾಗಿ ಕೊಡಲು ಬೆಟ್ಟದ ಹೂವ ತರುವೆ...
ಶೆರ್ಲಿ ಮೇಡಮ್ ಟು ಗಿವಿಂಗ್ ಮೌಂಟನ್ ಫ್ಲವರ್ ಬ್ರಿಂಗಿಂಗ್...
ಬೆಟ್ಟದ ಹೂ... ಹ ಹ ಹಾ....
ಬೆಟ್ಟದ ಹೂ... ಬೆಟ್ಟದ ಹೂ...

baa nalle madhuchandrake

ಚಿತ್ರ : ಬಾ ನಲ್ಲೆ ಮಧುಚಂದ್ರಕೆ

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ...
ಸುಟ್ಟಾವು ಬೆಳ್ಳಿ ಕಿರಣ...

ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ

ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ
ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವುವು ಮೊಲದ ಹಿಂಡು...
ಮುತ್ತುವುವು ಮೊಲದ ಹಿಂಡು...

ಈ ನನ್ನ ಎದೆಯ ಹೂದೋಟದಲ್ಲಿ ನೀನೆಟ್ಟ ಪ್ರೀತಿ ಬಳ್ಳಿ
ಈ ನನ್ನ ಎದೆಯ ಹೂದೋಟದಲ್ಲಿ ನೀನೆಟ್ಟ ಪ್ರೀತಿ ಬಳ್ಳಿ

ನೀನೆಟ್ಟ ಪ್ರೀತಿ ಬಳ್ಳಿ ಹೂದೋಟದಲ್ಲಿ
ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ ಉಲ್ಲಾಸವನ್ನು ಚೆಲ್ಲಿ...
ಉಲ್ಲಾಸವನ್ನು ಚೆಲ್ಲಿ...

ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು
ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು

ಹೂವಾಗಿ ಅರಳಿ ನೀನು ಈ ಊರ ಬನಕೆ
ಮರೆಯಾಗಬೇಡ ಮಕರಂದವೆಂದ ದುಂಬಿಗಳ ದಾಳಿಯಲ್ಲಿ...
ದುಂಬಿಗಳ ದಾಳಿಯಲ್ಲಿ...

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ... ಸುಟ್ಟಾವು ಬೆಳ್ಳಿ ಕಿರಣ...