Showing posts with label Kannada Lyrics. Show all posts
Showing posts with label Kannada Lyrics. Show all posts

Saturday, March 2, 2013

Khushiyagide eko ninnidale


ಖುಷಿಯಾಗಿದೆ ಏಕೋ ನಿನ್ನಿಂದಲೇ
ನಾ ನೋಡದೆ ನಿನ್ನನು ಇರಲಾರೆನೆ

ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ ನಿನ್ನನೆ ನೋಡುವೆ

ಕೇಳೆ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ...

ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ ನಾ ಮರೆತುಬಿಟ್ಟೆ ನನ್ನೇ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ ನಾ ಮರೆತು ಬಿಟ್ಟೆ ನನ್ನೇ
ಆದರೆ ಮಾರೆತೆ ಇಲ್ಲ ನಾ ನಿನ್ನ
ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ.. ಒಮ್ಮೆ ನೀ...
ಮಂಜಿನ ಹನಿಗಳ ಚಿಗುರೆಲೆಯ ಮೇಲೆ ನಿನ್ ಹೆಸರ ನಾ ಬರೆದೆ
ಚಿಟಪಟ ಮಳೆಯಲಿ ಪದೇ ಪದೇ ನೆನೆಯುತ ನಿನ್ನ ಸ್ಪರ್ಶವ ಸವಿದೆ
ನಿನ್ನಲ್ಲೇ ನಾ ಬೆರೆತೆ

ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಳೆಯಲು ನೀನಿರುವೆ.. ಒಮ್ಮೆ ನೀ..

kavithe kavithe neeneke padagalali kulithe


ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ
ನನ್ನದೆಯ ಗೂಡಲ್ಲಿ ಕವಿತೆಗಳ ಸಂತೆ
ಓ ಒಲವೆ ನೀ ತಂದ ಹಾಡಿಗೆ ನಾ ಸೋತೆ
ಕವಿತೆ ಕವಿತೆ ನೀನೇಕೆ ಪದಗಳಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ
ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ
ಮನದ ಕಡಲಾ ದಡದಾಟೊ ಅಲೆಗಳಲು ನಲುಮೆ
ಹೊಮ್ಮುತಿದೆ ರಾಗದಲಿ ಸ್ವರಮೀರೊ ತಿಮಿರು
ಚಿಮ್ಮುತಿದೆ ಸುಳ್ಳಾಡುವ ಕವಿಯಾಡೊ ಪೊಗರು
ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ
ಮನದ ಕಡಲಾ ದಡದಾಟೊ ಅಲೆಗಳಲು ನಲುಮೆ
ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೊ ಪ್ರಣಯ
ಉನ್ಮಾದ ತಾನಾಗಿ ಹಾಡಾಗೊ ಸಮಯ
ಏಕಾಂತ ಕಲ್ಲನ್ನು ಮಾಡುವುದೊ ಹೃದಯ
ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೊ ಪ್ರಣಯ

Nee Hinga Nodabyada nanna


ನೀ ಹಿಂಗ ನೋಡಬ್ಯಾಡ ನನ್ನ,
ನೀ ಹಿಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ||ಪ||

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ,
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ, ಎಲ್ಲಿ ಆಚೆಯಾ ದಂಡಿ
...ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ,
ನಾ ತಡಿಲಾರೆ ಅದು, ಯಾಕ ನೋಡತೀ, ಮತ್ತ ಮತ್ತ ನೀ ಇತ್ತ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ,
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ?
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು, ಮಾರೀಗೆ ಮಾರಿಯ ರೀತಿ,
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ಧಾರೀಲೆ ನೆನೆದ ಕೈಹಿಡಿದೆ ನೀನು ತಣ್ಣsಗ ಅಂತನ ತಿಳಿದು
ಬಿಡವೊಲ್ಲಿ ಇನ್ನೂನೂ ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲ ಎಲ್ಲನ್ನs
ಆ ಗಾದಿಮಾತು ನಂಬಿ, ನಾನು ದೇವರಂತ ತಿಳಿದೆಯೇನ ನೀ ನನ್ನ

ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ, ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣಿಮಿ ಚಂದಿರನ ಹೆಣಾ ಬಂತೋ ಮುಗಿಲಾಗ ತೇಲತಾ ಹಗಲ!

ನಿನ್ನ ಕಣ್ಣಿನಾಗ ಕಾಲೂರಿ ಮಳೆಯು, ನಡನಡಕ ಹುಚ್ಚು ನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ,
ಅತ್ತರೆ ಅತ್ತು ಬಿಡು, ಹೊನಲು ಬರಲಿ, ನಕ್ಯಾಕ ಮರಸತಿ ದುಕ್ಕ?
ಎಲೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿ ಕಚ್ಚಿ ಹಿಡಿಯದಿರು ಬಿಕ್ಕ.

Hendathi obbalu maneyolagiddare

ಹೆಂಡತಿ ಒಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರೂಪಾಯಿ
ಹೆಂಡತಿ ಒಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ

ಹೆಂಡತಿ ಒಬ್ಬಳು ಮನೆಯೊಳಗಿದ್ದರೆ
...ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿಲ್ಲದ ಕೋಪ.

ಕೈಹಿಡಿದವಳು ಕೈಬಿಡದವಳು
ಮಾಡಿದ ಅಡುಗೆಯ ಚಂದ
ನಾಗರಕುಚ್ಚಿನ ನಿಡುಜಡೆಯವಳು
ಈಕೆ ಬಂದುದು ಎಲ್ಲಿಂದ?

ಹಬ್ಬಿಗನೂರಿಗೆ ದಾರಿಯು ಇದ್ದರೆ
ಕನಸೇ ಇರಬೇಕು
ಅಲ್ಲಿಯ ದೊರೆತನ ಸಿಗುವಂತಿದ್ದರೆ
ನನಗೇ ಸಿಗಬೇಕು.

ತಾರೆಯ ಬೆಳಕಿನ ತುಂಬಿದ ಸಭೆಯಲಿ
ಸುಂದರಿ ಮೆರೆದಾಳು
ನನ್ನೊಡನವಳು ಸಿಂಹಾಸನದಲಿ
ಮೆಲ್ಲನೆ ನಕ್ಕಾಳು

ಚಂದಿರನೂರಿನ ಅರಮನೆಯಿಂದ
ಬಂದವರೀಗೆಲ್ಲಿ
ಬೆಳ್ಳಿಯ ಕೋಟೆಯ ಬಾಗಿಲಿನಿಂದ
ಬಂದವರೀಗೆಲ್ಲಿ

ಹೆಂಡತಿಯೊಂದಿಗೆ ಬಡತನ ದೊರೆತನ
ಏನೂ ಭಯವಿಲ್ಲ
ಹೆಂಡತಿ ಒಲುಮೆಯ ಭಾಗ್ಯವನರಿಯದ
ಗಂಡಿಗೆ ಜಯವಿಲ್ಲ.

Deepavu ninnade Galiyu ninnade


ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
(ಬೆಟ್ಟವು ನಿನ್ನದೆ ಬಯಲೂ ನಿನ್ನದೆ
ಹಬ್ಬಿನದಲಿ ಪ್ರೀತಿ) - ೨
ನೆಳಲೋ ಬಿಸಿಲೋ ಎಲ್ಲವೂ ನಿನ್ನವೆ - ೨
ಇರಲಿ ಏಕ ರೀತಿ
ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
(ಆಗೊಂದು ಸಿಡಿಲು ಈಗೊಂದು ಮುಗಿಲು
ನಿನಗೆ ಅಲಂಕಾರ) - ೨
ಅಲ್ಲೊಂದು ಹಕ್ಕಿಇಲ್ಲೊಂದು ಮುಗುಳು - ೨
ನಿನಗೆ ನಮಸ್ಕಾರ
ಕಡಲೂ ನಿನ್ನದೆ ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ ಈ ಭಾವ ಗೀತೆ - ೨
ನಿನ್ನ ಪದಧ್ವನಿ
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ ಹಡಗೂ ನಿನ್ನದೆ
ಮುಳುಗದಿರಲಿ ಬದುಕು...

Bettada Hoo



ಚಿತ್ರ : ಬೆಟ್ಟದ ಹೂ


ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
"ಎಲ್ಲಿ ಇನ್ನೊಂದು ಸಲ ಹೇಳು"
ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
ಸನ್‌ಲೈಟ್ ಲೇಟ್ ಕಮ್...
ರೇನ್ ಲೇಟ್ ಇಟ್ ಕಮ್...
ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್...
ಶೆರ್ಲಿ ಮೇಡಮ್-ಗಾಗಿ ಕೊಡಲು
ಬೆಟ್ಟದ ಹೂವ ತರುವೆ...
ಶೆರ್ಲಿ ಮೇಡಮ್ ಟು ಗಿವಿಂಗ್
ಮೌಂಟನ್ ಫ್ಲವರ್ ಬ್ರಿಂಗಿಂಗ್...
ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
ಸನ್‌ಲೈಟ್ ಲೇಟ್ ಕಮ್...
ರೇನ್ ಲೇಟ್ ಇಟ್ ಕಮ್...
ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್...
ಹ ಹ ಹ ಹ ಹ ಹಾ...
ಪಾಮ್ ಪಾಮ್ ಪಾಮ್ ಪಾಮ್... ಪೋ ಪೋ ಪಾಮ್...
(ದಿನವೂ ಹೂವಾ ಕೊಡುವೆ...
ಝಣ ಝಣ ರೂಪಾಯಿ ಪಡೆವೆ...) - 2
ಅಮ್ಮನ ಕೈಲಿ ಎಲ್ಲ ಕೊಟ್ಟು
ಹತ್ತೇ ಪೈಸಾ ತೆಗೆದುಕೊಳ್ಳುವೆ...
"ವೇಟ್ ವನ್ ಮಿನಿಟ್... ಐ ಟೆಲ್ ಕರೆಕ್ಟ್!"
ಹಾ... ಹಾ...
(ಡೈಲೀ ಫ್ಲವರ್ ಗಿವಿಂಗ್...
ಟಣ್ ಟಣ್ ರುಪೀಸ್ ಟೇಕಿಂಗ್...) - 2
ಆಲ್ ದಿ ಮನೀ ಮದರ್ ಕೀಪಿಂಗ್...
ಟೆನ್ ಪೈ ಓನ್ಲೀ ಐ ರಿಸೀವಿಂಗ್...
ಬಿಸಿಲೇ ಇರಲೀ...
ಸನ್‌ಲೈಟ್ ಲೇಟ್ ಕಮ್, ಕಮ್...
ಮಳೆಯೇ ಬರಲೀ...
ರೇನ್ ಲೇಟ್ ಇಟ್ ಕಮ್...
ಕಾಡಲ್ಲಿ ಮೇಡಲ್ಲಿ ಅಲೆವೆ... ಹ ಹ ಹ ಹಾಂ...
ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್...
(ಹಣವನು ಸೇರಿಸಿ ಇಡುವೆ...
ದಿನವೂ ಎಣಿಸುತಲಿರುವೆ...) - 2
ಹತ್ತು ರೂಪಾಯಿ ಕೂಡಿದ ಮೇಲೆ
ರಾಮಾಯಣದ ಪುಸ್ತಕ ಕೊಳುವೆ
"ವೆರಿ ವೆರಿ ಡಿಫಿಕಲ್ಟ್ ಪ್ರಾಬ್ಲಮ್... ಟೂ ಮೆನೀ ವರ್ಡ್ಸ್... ವೇಟ್, ವನ್ ಮಿನಿಟ್. ಹಾನ್... "
(ಮನೀ ಮನೀ ಐ ವಿಲ್ ಕಲೆಕ್ಟಿಂಗ್...
ಡೈಲೀ ಡೈಲೀ ಕೌಂಟಿಂಗ್) - 2
ಟೆನ್ ರುಪೀಸ್ ಆಫ್ಟರ್ ಜಾಯ್ನಿಂಗ್
ರಾಮಾಯಣ್ ಬುಕ್ ಪರ್‌ಚೇಸಿಂಗ್...
ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
ಸನ್‌ಲೈಟ್ ಲೇಟ್ ಕಮ್...
ರೇನ್ ಲೇಟ್ ಇಟ್ ಕಮ್...
ಫಾರೆಸ್ಟ್ ಮೌಂಟನ್ ಐ ಗೋ ರೋಮಿಂಗ್, ರೋಮಿಂಗ್...
ಶೆರ್ಲಿ ಮೇಡಮ್-ಗಾಗಿ ಕೊಡಲು ಬೆಟ್ಟದ ಹೂವ ತರುವೆ...
ಶೆರ್ಲಿ ಮೇಡಮ್ ಟು ಗಿವಿಂಗ್ ಮೌಂಟನ್ ಫ್ಲವರ್ ಬ್ರಿಂಗಿಂಗ್...
ಬೆಟ್ಟದ ಹೂ... ಹ ಹ ಹಾ....
ಬೆಟ್ಟದ ಹೂ... ಬೆಟ್ಟದ ಹೂ...

baa nalle madhuchandrake

ಚಿತ್ರ : ಬಾ ನಲ್ಲೆ ಮಧುಚಂದ್ರಕೆ

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ...
ಸುಟ್ಟಾವು ಬೆಳ್ಳಿ ಕಿರಣ...

ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ

ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ
ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವುವು ಮೊಲದ ಹಿಂಡು...
ಮುತ್ತುವುವು ಮೊಲದ ಹಿಂಡು...

ಈ ನನ್ನ ಎದೆಯ ಹೂದೋಟದಲ್ಲಿ ನೀನೆಟ್ಟ ಪ್ರೀತಿ ಬಳ್ಳಿ
ಈ ನನ್ನ ಎದೆಯ ಹೂದೋಟದಲ್ಲಿ ನೀನೆಟ್ಟ ಪ್ರೀತಿ ಬಳ್ಳಿ

ನೀನೆಟ್ಟ ಪ್ರೀತಿ ಬಳ್ಳಿ ಹೂದೋಟದಲ್ಲಿ
ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ ಉಲ್ಲಾಸವನ್ನು ಚೆಲ್ಲಿ...
ಉಲ್ಲಾಸವನ್ನು ಚೆಲ್ಲಿ...

ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು
ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು

ಹೂವಾಗಿ ಅರಳಿ ನೀನು ಈ ಊರ ಬನಕೆ
ಮರೆಯಾಗಬೇಡ ಮಕರಂದವೆಂದ ದುಂಬಿಗಳ ದಾಳಿಯಲ್ಲಿ...
ದುಂಬಿಗಳ ದಾಳಿಯಲ್ಲಿ...

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ... ಸುಟ್ಟಾವು ಬೆಳ್ಳಿ ಕಿರಣ...

Thursday, December 6, 2012

CHENDUTIYA PAKKADALI - DRAMA LYRICS


ಚಿತ್ರ : ಡ್ರಾಮಾ
ಗಾಯಕ : ಸೋನು ನಿಗಮ್
ಸಾಹಿತ್ಯ & ನಿರ್ದೇಶಕರು : ಯೋಗರಾಜ್ ಭಟ್

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..
ಒಂದೊಳ್ಳೆ ಬೈಗುಳವಾ ನಿ ನುಡಿಯುವಹಾಗೆ ಅತಿ ತುಂಟ
ಮಾತೊಂದಾ ನಾನಾಡ್ಲಾ
ಕಿಡಿಗೇಡಿ ಕನಸೊಂದಾ ಕಟ್ಟಿಡಲಾ
ಇದುಯಾವ್ದು ಹೇಳ್ದೇನೆ ಮುಚ್ಚಿಡ್ಲಾ

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..
ಒಂದೊಳ್ಳೆ ಬೈಗುಳವಾ ನಿ ನುಡಿಯುವಹಾಗೆ ಅತಿ ತುಂಟ
ಮಾತೊಂದಾ ನಾನಾಡ್ಲಾ

ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು
ಹಾಡಿನೊಡ ನಿನ್ನನ್ನು ಸ್ಮೈಲ್ ಆದ್ರೂ ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದಾ
ನೀ ಮುಡಿದ ಸಂಪಿಗೆಯಾ ಸ್ಮೆಲ್ ಆದ್ರೂ ಸಿಗಲಿ
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ
ಬೆನ್ನಿನಲಿ ಬೆವರಾಗಿ ನಾನಿರ್ಲಾ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ
ಚೆಂದುಟಿಯ ಪಕ್ಕದಲಿ...

ಒಮ್ಮೊಮ್ಮೆ ಯೋಚಿಸುವೆ ಯಾತಕ್ಕೆ ನಾನಾದೆ
ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು
ಇನ್ನೆಷ್ಟು ಚಳಿಗಾಲ ಕಾಯೋದು ಹುಡುಗಿ
ಸ್ವಪ್ನಕ್ಕೆ ಬೆಡ್ ಶೀಟ್ ಹೊಚ್ಚರ್ಲಾ
ಚಂದ್ರಂಗೆ ಮೊಂಬತ್ತಿ ಕೊಟ್ಟಿರ್ಲಾ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ

ಬಿಗಿದಿಟ್ಟ ತಂಬೂರಿ ತಂತಿ ಎಂತಾಗಿರುವೆ
ತುಂಡು ಮಾಡೆನ್ನನು ಸೌಂಡಾದ್ರು ಬರಲಿ
ನಿನ್ನ ತಲೆ ದಿಂಬಿನ ಚಿತ್ರವಾಗಿರುವೆ
ನನ್ನ ಕನವರಿಕೆಯಲಿ ಒಂದಾದ್ರು ಸಿಗಲಿ
ಸಿಗದಂತ ಕೊನೆ ಸಾಲು ಬಿಟ್ಟಿರ್ಲಾ..
ಯಾವದಕ್ಕು ಕೊನೆಗೊಂದು ಡಾಟ್ ಇಡ್ಲಾ..
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..
ಒಂದೊಳ್ಳೆ ಬೈಗುಳವಾ ನಿ ನುಡಿಯುವಹಾಗೆ ಅತಿ ತುಂಟ
ಮಾತೊಂದಾ ನಾನಾಡ್ಲಾ

Wednesday, December 5, 2012

KALLI IVALU - PREM ADDA LYRICS

ಚಿತ್ರ : ಪ್ರೇಮ್ ಅಡ್ಡಾ
ಗಾಯಕ : ಸೋನು ನಿಗಮ್, ಶ್ರೇಯಾ ಗೋಷಾಲ್
ಸಾಹಿತ್ಯ : ನಾಗೇಂದ್ರ ಪ್ರಸಾದ್,
 ನಿರ್ದೇಶನ : ಮಹೇಶ್ ಬಾಬು

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊನ್ದೇ ಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು

ಅವಳ ಹಿಂದೆ ಹಿಂದೆ ಹೋದೆ ನಾನು ತುಂಬಾ ಹಿಡಿಸಿ

ಅಯ್ಯೋ ಮೂಗನೇನು ಇವನು ಬಾಯೀ ಬಿಡನು
ನನ್ನ ಪ್ರೀತಿ ಮಾಡೋ ವಿಷಯಾ
ನನಗು ಹೇಳೋಕು ಹೆದರುವ

ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೇ ಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗೂ ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು

ಸೈಕಲ್ ಸವಾರ ಪ್ರೀತಿ ಫಕೀರಾ
ಹೃದಯದ ಜೊಳಿಗೆ ಹಿಡಿದನು
ಮನೆಯ ಹಸಾರ ದಾಟಿ ಮನಸಾರ
ಹೃದಯವ ಗುಟ್ಟಾಗಿ ಎಸೆದೆನು
ಮನೆಕಡೆ ಯಾತಕೋ ಹೋದೆ ರೀ
ಹೃದಯವ ಎಸೆದಳು ಚೋಕರಿ
ಜನುಮಕೂ ಕಾಯುವೆನು ನನ್ನ ಆಣೆ ರೀ

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊನ್ದೇ ಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ ಹಿಂದೆ ಹಿಂದೆ ಹೋದೆ ನಾನು ತುಂಬಾ ಹಿಡಿಸಿ

ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ
ನನಗೆ ನಾನೀಗ ಹೊಸಬನಾ
ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ
ನನ್ನೇ ನಾನು ನೋಡುವೆ ಪ್ರತಿದೀನಾ
ಇವನನು ನೋಡಿದ ಕೂಡಲೇ
ಹರಡಿತು ಪ್ರೀತಿಯ ಖಾಯಿಲೆ
ಹರುಷಕೆ ಸಾಯುವೇನು ನನ್ನ ಆಣೆ ರೀ

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊನ್ದೇ ಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ ಹಿಂದೆ ಹಿಂದೆ ಹೋದೆ ನಾನು ತುಂಬಾ ಹಿಡಿಸಿ

ಮೂಗನೇನು ಇವನು ಬಾಯೀ ಬಿಡನು
ನನ್ನ ಪ್ರೀತಿ ಮಾಡೋ ವಿಷಯಾ
ನನಗು ಹೇಳೋಕು ಹೆದರುವ

ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೇ ಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗೂ ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು

Tuesday, December 4, 2012

Bombe Adsonu - Drama Lyrics


ಚಿತ್ರ : ಡ್ರಾಮಾ (2012)

ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು

ಲೆಕ್ಕಾನು ದೇವರ ಕೈಯಲ್ಲಿ ನಾವೇನ್ ಮಾಡೋಣ
ಎಲ್ಲಾರು ಮುಖಮುಚ್ಕೊಂಡು ಡ್ರಾಮಾ ಆಡಾಣ
ಬೊಂಬೆ ಆಡ್ಸೋನು ಮೇಲೆ ಕುಂತವ್ನು
 ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು

ಇಡ್ಲಿಗೆ ತುದಿ ಯಾವ್ದು ಮುದ್ದೆಗೆ ಬುಡ ಯಾವ್ದು
ಗುಂಡೀಲಿ ಹೆಣ ಯಾವ್ದು ಹುಂಡೀಲಿ ಹಣ ಯಾವ್ದು
ಪ್ರೇಮಕ್ಕೆ ಶ್ರಿಬ್ಬಕ್ಕು ಕಾಮಕ್ಕೆ ರೊಬ್ಬಕ್ಕು
ಜೀವ್ನಾನೇ ಚೌ ಚೌವಾಯ್ತು ಯಾಕೆ ದೂಸ್ರಾ ಮಾತು
ಉಪ್ಪನ್ನು ತಿಂದಮೇಲೆ ಬಿಪಿ ಬರ್ದೆ ಇರ್ತಾದಾ
ಉಪ್ಪಿನಾ ಕಾಯಂತ ಲೈಫ್ನ ತಿಂದೇ ಇರಕಾಯ್ತದಾ
ನಾಲ್ಗೇನೆ ನಮ್ ಕೈಲಿಲ್ಲಾ ನಾವೇನ್ ಮಾಡಾಣಾ
ಅವ್ನು ಬರ್ಕೊಟ್ಟ ಡೈಲಾಗ್ ಹೇಳಿ ಡ್ರಾಮಾ ಆಡೋಣಾ

ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು

ಒಂದೊಂದು ಮುಸುಡೀಲು ನೂರೆಂಟು ಕಲರ್ರು
ಇಲ್ಲೊಬ್ಬ ಸೂಪರ್ರು ಅಲ್ಲೊಬ್ಬ ಲೋಪರ್ರು
ಲೋಕದ ಮೆಟಾಡೋರು ಓಡಿಸುತಾ ದೇವ್ರು
ಸುಸ್ತಾಗಿ ಮಲಗೋವ್ನೆ ಯಾರಪ್ಪ ಎಬ್ಬಸೋರು

ಯಾವಾನ ಬಿಟ್ಟು ಹೋದ ಹಳೇ ಚಪ್ಲಿ ಈ ಬಾಳು
ಹಾಕ್ಕೋಂಡು ಹೋಗು ಮಗನೇ ನಿಲ್ಲಬೇಡ ನೀನೆಲ್ಲೂ
ಭಗವಂತಾ ರೋಡಲ್ಲಿ ಸಿಕ್ರೆ ನಾವೇನ್ ಮಾಡಾಣ
ಅವನೀಗೂ ಬಣ್ಣ ಹಚ್ಚಿ ಡ್ರಾಮಾ ಆಡೋಣಾ

ಬೊಂಬೆ ಆಡ್ಸೋನು ಮೇಲೆ ಕುಂತವ್ನು
 ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು

ದೇಹಾನೆ ಟೆಂಪರ್ವರಿ ನಾವೇನ್ ಮಾಡೋಣ
ಮಣ್ಣಲ್ಲಿ ಹೋಗೋಗಂಟಾ ಡ್ರಾಮಾ ಆಡೋಣ