Tuesday, December 11, 2012

MELKOTE HUDGI -PREM ADDA SONG LYRICS


ಚಿತ್ರ : ಪ್ರೇಮ್ ಅಡ್ಡಾ
 
ಮೇಲ್ಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣ್ಕಿ ಇಣ್ಕಿ ನೋಡುತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್
ತಳುಕು ಬಳುಕು ಸೊಂಟ ಬಿಟ್ಕಂಡ್
ಕುಲ್ಕಿ ಕುಲ್ಕಿ ನಡೀತಾಳೆ ಏನ್ ವಯ್ಯಾರ

ನೋಟಕ್ಕೊಂದು ಮಿಸ್ಸಿನ ಮನೆ
ಆಟಕ್ಕೊಂದು ಬೆಲ್ಲದ ಮನೆ
ಊಟಕ್ಕಿಟ್ಕೋ ಒಂದೇ ಮನೆ ಗೂಟದ್ ರಾಮಣ್ಣ

ಮೇಲ್ಕೋಟೆ ಹುಡುಗಿ ಒಬ್ಳು....
ಮೇಲ್ಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣ್ಕಿ ಇಣ್ಕಿ ನೋಡುತಾಳೆ ಏನ್ ಸಿಂಗಾರ

"ಕೇಳ್ ಸಖಿ ಕೇಳ್ ಪ್ರಿಯ ಮೊಗವ
ಕೇಳ್ ಸಖಿ ಕೇಳ್ ಕೇಳ್ ಪ್ರಿಯ ಮೊಗವ
ಎನ್ ಹೇಳ್ಳಿ ಅವಳ ಸಿಹಿ ನಗುವ"
"ಹೇಳ್ ಬಿಡ್ಲೆ"
"ಏನ್ ನಿನ್ ಮೌವ್ವನ ಆಹಾ
ಏನ್ ನಿನ್ ಮೌವ್ವನ ಔವ್ವನ ಔವ್ವನಾ"

"ಲೇ ಪಿತೃಪಿಲ್ಲಿ ಮಗನ
ನಿಮ್ ಔವ್ವನ ಅಲ್ಲೋ ಯಪ್ಪ
ಯೌವ್ವನ ಯೌವ್ವನ"
"ಮೌವ್ವನ ಔವ್ವನ ಔವ್ವನಾ"
"ಏ ನಿದ್ದಿ ಕಣ್ಣಾಗ್ ಹುಟ್ಟಿದ್ ನನ್ ಮಗನ
ಸತ್ಯನಾಶ್ ಆಗೋಗ್ಲೇ"

ಊಟಕ್ಕೆ ಉಪ್ಪಿನಕಾಯಿ ಆಟಕ್ಕೆ ಕುಂಬಳಕಾಯಿ
ನೆಕಳ್ಳಿ ಹೊನ್ದ್ಕಳ್ಳಿ ಅನ್ತಾಳೆ
ಇವಳು ನಕ್ಕ್ ಬುಟ್ರೆ ತೂತ್ ವಡೆ
ಇವಳು ಸಿಕ್ ಬುಟ್ರೆ ಮೊಸರ್ವಡೆ

ಕೆಂಪಾಗಿರೋ ಬತ್ತಾಸು ಬಾಯ್ಗಿಟ್ರೆ ಕಲ್ಲಾಸು
ಚೀಪ್ಕಳ್ಳಿ ಚೀಪ್ಕಳ್ಳಿ ಅನ್ತಾಳೆ
ಇವಳು ಬಚ್ಚಿಟ್ರೆ ಹೊಮ್ಬಾಳೆ
ಇವಳು ಬಿಚ್ಬಿಟ್ರೆ ಬಾಳ್ ಹಾಳೆ

ಮೈಯೆಲ್ಲ ಮಂಡ್ಯ ಸಕ್ರೆ ಫ್ಯಾಕ್ಟರೀ ಕಣಣ್ಣ
ಇವ್ಳು ಮೈಸೂರು ಪಾಕಿನಂಗೆ ನೈಸ್-ಉ ಕಣಣ್ಣ
ವಸಿ ನಾಲ್ಗೆ ಹಾಕಿ ನೆಕ್ಕಿಬಿಡೋಣಾ ಲಕ ಲಕ ಲಕ ಲಕ

ಮೇಲ್ಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣ್ಕಿ ಇಣ್ಕಿ ನೋಡುತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊನ್ಡ್
ತಳುಕು ಬಳುಕು ಸೊಂಟ ಬಿಟ್ಕನ್ಡ್
ಕುಲ್ಕಿ ಕುಲ್ಕಿ ನಡೀತಾಳೆ ಏನ್ ವಯ್ಯಾರ

"ಎನ್ನ ಮೋರೆಯ ಕೇಳದೇನೊ
ಸಿ ಕೀಸ್ನಾ ಸಿ ಕೀಸ್ನಾ ಕೀಸ್ನಾ
ನನ್ನ ಸೀರೆಯನ್ನು ಈ ದೂರ್ತಕೌರವರು
ಕಿತ್ತಾಕುತ್ತಿರುವರು ನನ್ನ ಮಾನವನ್ನು
ಕಾಪಾಡು ಬಾ"

"ಹ ಹ ಹ ಹ ಹ ದ್ರೌಪದಿ
ನಿನ್ನ ಸಿ ಕೀಸ್‌ನ ನಿಗಿರುಸುತ್ತಿರುವನು"
"ಅವ್ವವ್ವವ್ವವ್ವಾ ನಿಗಿರುಸುತ್ತಿರುವನು ಅಲ್ಲೋ
ನಿದ್ರಿಸುತ್ತಿರುವನು"

ಇವ್ಳು ದೇವ್ರು ಕೊಟ್ಟ ವರದಾನ
ಮೈಯ್ಯೇ ಒಂದು ಮೈದಾನ
ಆಡ್ಕಳ್ಳಿ ಆಡ್ಕಳ್ಳಿ ಅಂತಾಳೆ
ಬಾರ್ಲಾ ಕಬಡ್ಡಿ ಆಟ ಆಡುವಾ
ನಲ್ಲಿ ಜಗ್ಗಿ ಬಗ್ಗಿ ಕುಣಿಯುವ

ಇವ್ಳು ಕೆರೆ ಪಕ್ಕ ಜಾಮೀನು
ಫಲವತ್ತಾದ ಕೆಮ್ಮಣ್ಣು
ಕುತ್ಕಳ್ಳಿ ಬಿದ್ಕಳ್ಳಿ ಅನ್ತಾಳೆ
ಅಲ್ಲಿ ಕಬ್ಬನ್ನಾರ ಬೆಳೆಯುವ
ಇಲ್ಲ ತೆಂಗಿನ್ ಸಸಿ ನೆಡುವಾ

ಬೇಲಿಯಿನ್ದ ಬೇಲಿಗ್ ಹಾರೋ
ಪಾತ್ರಗಿತ್ತಿನೊ
ಗಳಿಗೆ ಗಳಿಗೊನ್ದು ಬಣ್ಣ ಹಾಕೋ ಊಸರ್ವಳ್ಳಿನೊ
ಇವಳು ಮುಟ್ಟಿದ್ರೆ ಮುನಿ ಸೊಪ್ಪು ಕಣಣ್ಣೊ

ಮೇಲ್ಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣ್ಕಿ ಇಣ್ಕಿ ನೋಡುತಾಳೆ ಏನ್ ಸಿಂಗಾರ

ನೋಟಕ್ಕೊಂದು ಮಿಸ್ಸಿನ ಮನೆ
ಆಟಕ್ಕೊಂದು ಬೆಲ್ಲದ ಮನೆ

ಊಟಕ್ಕಿಟ್ಕೋ ಒಂದೇ ಮನೆ ಗೂಟದ್ ರಾಮಣ್ಣ

ಮೇಲ್ಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
ಇಣ್ಕಿ ಇಣ್ಕಿ ನೋಡುತಾಳೆ ಏನ್ ಸಿಂಗಾರ

Thursday, December 6, 2012

CHENDUTIYA PAKKADALI - DRAMA LYRICS


ಚಿತ್ರ : ಡ್ರಾಮಾ
ಗಾಯಕ : ಸೋನು ನಿಗಮ್
ಸಾಹಿತ್ಯ & ನಿರ್ದೇಶಕರು : ಯೋಗರಾಜ್ ಭಟ್

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..
ಒಂದೊಳ್ಳೆ ಬೈಗುಳವಾ ನಿ ನುಡಿಯುವಹಾಗೆ ಅತಿ ತುಂಟ
ಮಾತೊಂದಾ ನಾನಾಡ್ಲಾ
ಕಿಡಿಗೇಡಿ ಕನಸೊಂದಾ ಕಟ್ಟಿಡಲಾ
ಇದುಯಾವ್ದು ಹೇಳ್ದೇನೆ ಮುಚ್ಚಿಡ್ಲಾ

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..
ಒಂದೊಳ್ಳೆ ಬೈಗುಳವಾ ನಿ ನುಡಿಯುವಹಾಗೆ ಅತಿ ತುಂಟ
ಮಾತೊಂದಾ ನಾನಾಡ್ಲಾ

ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು
ಹಾಡಿನೊಡ ನಿನ್ನನ್ನು ಸ್ಮೈಲ್ ಆದ್ರೂ ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದಾ
ನೀ ಮುಡಿದ ಸಂಪಿಗೆಯಾ ಸ್ಮೆಲ್ ಆದ್ರೂ ಸಿಗಲಿ
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ
ಬೆನ್ನಿನಲಿ ಬೆವರಾಗಿ ನಾನಿರ್ಲಾ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ
ಚೆಂದುಟಿಯ ಪಕ್ಕದಲಿ...

ಒಮ್ಮೊಮ್ಮೆ ಯೋಚಿಸುವೆ ಯಾತಕ್ಕೆ ನಾನಾದೆ
ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು
ಇನ್ನೆಷ್ಟು ಚಳಿಗಾಲ ಕಾಯೋದು ಹುಡುಗಿ
ಸ್ವಪ್ನಕ್ಕೆ ಬೆಡ್ ಶೀಟ್ ಹೊಚ್ಚರ್ಲಾ
ಚಂದ್ರಂಗೆ ಮೊಂಬತ್ತಿ ಕೊಟ್ಟಿರ್ಲಾ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ

ಬಿಗಿದಿಟ್ಟ ತಂಬೂರಿ ತಂತಿ ಎಂತಾಗಿರುವೆ
ತುಂಡು ಮಾಡೆನ್ನನು ಸೌಂಡಾದ್ರು ಬರಲಿ
ನಿನ್ನ ತಲೆ ದಿಂಬಿನ ಚಿತ್ರವಾಗಿರುವೆ
ನನ್ನ ಕನವರಿಕೆಯಲಿ ಒಂದಾದ್ರು ಸಿಗಲಿ
ಸಿಗದಂತ ಕೊನೆ ಸಾಲು ಬಿಟ್ಟಿರ್ಲಾ..
ಯಾವದಕ್ಕು ಕೊನೆಗೊಂದು ಡಾಟ್ ಇಡ್ಲಾ..
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..
ಒಂದೊಳ್ಳೆ ಬೈಗುಳವಾ ನಿ ನುಡಿಯುವಹಾಗೆ ಅತಿ ತುಂಟ
ಮಾತೊಂದಾ ನಾನಾಡ್ಲಾ

Wednesday, December 5, 2012

KALLI IVALU - PREM ADDA LYRICS

ಚಿತ್ರ : ಪ್ರೇಮ್ ಅಡ್ಡಾ
ಗಾಯಕ : ಸೋನು ನಿಗಮ್, ಶ್ರೇಯಾ ಗೋಷಾಲ್
ಸಾಹಿತ್ಯ : ನಾಗೇಂದ್ರ ಪ್ರಸಾದ್,
 ನಿರ್ದೇಶನ : ಮಹೇಶ್ ಬಾಬು

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊನ್ದೇ ಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು

ಅವಳ ಹಿಂದೆ ಹಿಂದೆ ಹೋದೆ ನಾನು ತುಂಬಾ ಹಿಡಿಸಿ

ಅಯ್ಯೋ ಮೂಗನೇನು ಇವನು ಬಾಯೀ ಬಿಡನು
ನನ್ನ ಪ್ರೀತಿ ಮಾಡೋ ವಿಷಯಾ
ನನಗು ಹೇಳೋಕು ಹೆದರುವ

ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೇ ಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗೂ ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು

ಸೈಕಲ್ ಸವಾರ ಪ್ರೀತಿ ಫಕೀರಾ
ಹೃದಯದ ಜೊಳಿಗೆ ಹಿಡಿದನು
ಮನೆಯ ಹಸಾರ ದಾಟಿ ಮನಸಾರ
ಹೃದಯವ ಗುಟ್ಟಾಗಿ ಎಸೆದೆನು
ಮನೆಕಡೆ ಯಾತಕೋ ಹೋದೆ ರೀ
ಹೃದಯವ ಎಸೆದಳು ಚೋಕರಿ
ಜನುಮಕೂ ಕಾಯುವೆನು ನನ್ನ ಆಣೆ ರೀ

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊನ್ದೇ ಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ ಹಿಂದೆ ಹಿಂದೆ ಹೋದೆ ನಾನು ತುಂಬಾ ಹಿಡಿಸಿ

ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ
ನನಗೆ ನಾನೀಗ ಹೊಸಬನಾ
ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ
ನನ್ನೇ ನಾನು ನೋಡುವೆ ಪ್ರತಿದೀನಾ
ಇವನನು ನೋಡಿದ ಕೂಡಲೇ
ಹರಡಿತು ಪ್ರೀತಿಯ ಖಾಯಿಲೆ
ಹರುಷಕೆ ಸಾಯುವೇನು ನನ್ನ ಆಣೆ ರೀ

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊನ್ದೇ ಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ ಹಿಂದೆ ಹಿಂದೆ ಹೋದೆ ನಾನು ತುಂಬಾ ಹಿಡಿಸಿ

ಮೂಗನೇನು ಇವನು ಬಾಯೀ ಬಿಡನು
ನನ್ನ ಪ್ರೀತಿ ಮಾಡೋ ವಿಷಯಾ
ನನಗು ಹೇಳೋಕು ಹೆದರುವ

ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೇ ಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗೂ ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು

THUND HYKLA SAHAVASA - DRAMA LYRICS

ಚಿತ್ರ : ಡ್ರಾಮಾ
ಗಾಯಕ : ವಿಜಯ್ ಪ್ರಕಾಶ್
ಸಂಗೀತ : ಹರಿಕೃಷ್ಣ
ಸಾಹಿತ್ಯ &ನಿರ್ದೇಶಕರು : ಯೋಗರಾಜ್ ಭಟ್


ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ
ಲಬಲಬಲಬ ಲಯ್ಯಾಲೆ ಅಲಬಲಬಲ ಬಯ್ಯಾಲೆ

ಹೆಂಗೋ ಮೊನ್ನೆ ತಾನೇ ಪಿಯುಸಿ ಮುಗ್ಸೋರೇ
ಊರ್ಹಾಳು ಮಾಡೋದಕ್ಕೆ ರೀಸರ್ಚ್ ನಡೆಸವ್ರೇ
ಹೆಂಗೇ ಹಾಡಿದರೂ ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಹೆಂಗೇ ಹಾಡಿದರೂ ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಲಬಲಬಲಬ ಲಯ್ಯಾಲೆ ಅಲಬಲಬಲ ಬಯ್ಯಾಲೆ

ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ ಆ ಆ ಆ ಆ ಆ ..
ದಯ್ಯಾರೆ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯ
ದಯ್ಯಾರೆ ದಯ್ಯ ದಯ್ಯ ದಯ್ಯರೇ.....
ದಯ್ಯಾರೆ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯ
ದಯ್ಯಾರೇ
ಇವರು ಕಾಲು ಇಟ್ರು ಅಂದ್ರೆ ಅದೆ ರೋಡು
ಈ ನನ್ಮಕ್ಲಿಗೆ ಬಯೋಡೇಟಾ ಬೇರೆ ಕೇಡು
 ....

ಯೌವನದ ಹೊಳೆಯಲ್ಲಿ ಹಳೆ ಬೋಟು
ಬೋಟಲ್ಲಿ ನೂರಾಎಂಟು ಹಳೆ ತೂತು...
ಬೆಳಗಾಗೆದ್ದು ಬೆಟ್ಟಕ್ಕೆ ಹರಿದಾರ ಕಟ್ಟಿ ಎಳೆದವ್ರೆ
ಓಡುತ್ತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ
ಅನಾಸಿನ್ನು ತಿಂದ್ರು ತಲೆ ನೋಯ್ತವೆ
ಚಿಂತೇಲಿ ಊಟ ಬಿಟ್ರೆ ಗ್ಯಾಸು ಆಯ್ತವೆ
ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ
ದೊಡ್ಡೋರು ಕೊಡೋದಿಲ್ಲ ಪರ್ಮಿಶನ್ನು
ಕಂಪೌಂಡು ಹಾರುತಿದ್ದ ಜನರೇಶನ್ನು
ಜನರೇಶನ್ನೂ...
ಬೇಕಿಲ್ಲಾ ಪ್ರಳಯಕ್ಕೆ ಕಾಯೋದಿನ್ನೂ
ತುಂಡ್ ಹೈಕ್ಳ್ ಮುಳುಗಿಸ್ತಾರೆ ಊರನ್ನು
ಮೀಸೆ ಗೀಸೆ ಬಂದಾಗ ಹಗಲು ರಾತ್ರಿ ರಾದ್ಧಾಂತ
ಬಿಳಿ ಗಡ್ಡ ಬಂದಾಗ ಹೇಳಿದ್ದೆಲ್ಲಾ ವೇದಾಂತ
ಪ್ರತಿ ಎಂಡಿನಲ್ಲೂ ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲ್ಸ ಎಲ್ಲ ಇಂತವೇ


ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ

Tuesday, December 4, 2012

SANJU MATTU GEETHA SERABEKU ANTA - LYRICS

ಚಿತ್ರ : ಸಂಜೂ ಮತ್ತು ಗೀತಾ
ಗಾಯಕಿ : ಶ್ರೇಯಾ ಗೋಷಾಲ್
ಸಾಹಿತ್ಯ : ಕವಿರಾಜ್
ನಿರ್ದೇಶಕರು : ನಾಗಶೇಖರ್

ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನೂ...

ನನ್ನ ಜೀವಕಿಂತ ನೀನೆ ನನ್ನ ಸ್ವಂತ
ಇರುವಾಗ ನಾನು..  ಚಿಂತೆ ಏನು
ನಿನ್ನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನೂ
ನನ್ನ ಎಲ್ಲ ಖುಷಿಯನ್ನು ಕೊಡುವೆ ನಿನ್ನ ವಶಕಿನ್ನು
ಮಳೆಯ ಹನಿ ಉರುಳೋ ದನಿ ತರವೇ...
ನಿನ್ನ ಸೇರುವೇ... ನಿನ್ನ ಸೇರುವೇ... ನನ್ನೋಲವೇ...

ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನೂ...

ಕಂಡಿಲ್ಲಾ ಯಾರು ಆ ದೇವರನ್ನು...
ಇರಬಹುದು ಏನೋ ನಿನ್ನಂತೆ ಅವನು...
ಗೆಳೆಯ ಎಂದರೇ ಅದಕೂ ಹತ್ತಿರ...
ಇನಿಯಾ ಎಂದರೇ ಅದಕೂ ಎತ್ತರ...
ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು...
ಕರಗಿ ಹೋಗಲೇನು ನಿನ್ನ ಕರಗಳಲ್ಲೀ ನಾನು...
ಯುಗದಾಚೆಗೂ ಜಗದಾಚೆಗೂ ಜೋತೆಗೆ ಸಾಗುವೇ...
ಕಡಲೆಲ್ಲವಾ ಅಲೆ ಸುತ್ತುವಾ ತರವೇ...
ನಿನ್ನ ಸೇರುವೇ... ನಿನ್ನ ಸೇರುವೇ... ನನ್ನೋಲವೇ...
ಹಾಳಾದ ಸಂತೆ ನಡುವಲ್ಲಿ ನಿಂತೆ... ಬಿಡಬೇಡ ನನ್ನ ಒಬ್ಬಂಟಿಯಂತೇ...
ಭಯವಾಗಿದೆ ನನಗೆ ಈ ಕ್ಷಣ... ಬಳಿ ಬರಬಾರದೇ ನೀನು ತಕ್ಷಣ...
ಕೈಯ ಹಿಡಿದು ನನ್ನಾ... ದೂರ ಕರೆದುಕೊಂಡು ಹೋಗು...
ಕರುಣೆ ಬಾರದೇನು ಹೇಳು... ನನ್ನ ಮೇಲೆ ನಿನಗು...
ನಿನ್ನ ನಂಬಿದ ನನ್ನ ಜೀವದ ಹೊಣೆಯು ನಿನ್ನದೇ...
ಮುಳುಗೊನಿಗೆ ಕೊನೆಯಾಸೆ ತರವೇ...
ಬರಬಾರದೇ ಬರಬಾರದೇ ನನ್ನೊಲವೇ....

ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನೂ...

NAGU ENDIDE MANJINA BINDU - PALLAVI ANUPALLVI


ಚಿತ್ರ : ಪಲ್ಲವಿ ಅನುಪಲ್ಲವಿ
ಗಾಯಕಿ : ಎಸ್. ಜಾನಕಿ
ಸಂಗೀತ : ಇಳಯರಾಜಾ
ಸಾಹಿತ್ಯ : ಆರ್. ಎನ್. ಜಯಗೋಪಾಲ್
ನಿರ್ದೇಶಕರು : ಮಣಿರತ್ನಮ್

ನಗು ಎಂದಿದೆ ಮಂಜಿನಾ ಬಿಂದು
ನಲಿ ಎಂದಿದೆ ಗಾಳಿ ಇಂದು..
ನಗು ಎಂದಿದೆ ಮಂಜಿನಾ ಬಿಂದು

ಚಿಲಿಪಿಲಿ ಎಂದು ಹಕ್ಕಿಯೂ ಹೇಳಿದೆ ಈಗ.. ಬಾ ಬಾ..
ಜೊತೆಯಲಿ ಕೂಡಿ ನಮ್ಮಂತೆ ಹಾರೂ ನೀ ಬೇಗ..
ಬಾ ಬಾ..
ಹಾರಲು ಆಗದ ಸೋತಿರಲು.. ಬಾಳಿಗೆ ಗೆಳೆಯನು ಬೇಕಿರಲು..
ಬಯಸಿದೆ ಅರಸಿದೆ ನಾ.. ಕಂಡೆ ಈಗಲೆ ನಾ..
ನನ್ನ ಸ್ನೇಹಿತನಾ,,
ಇದೆ ನಗುವಾ ಮನದಾ ಸ್ಪಂಧಾ.. ಸವಿ ಮಧುರಾ
ಮಮತೆ ಬಂಧಾ..

ಹಾಡುವಾ ಬಾ ಬಾ ನದಿ ಅಲೆ ಕೊಡುವುದು ಜಾಗ ಈಗ..
ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ ..
ಪ್ರಕೃತಿಯು ಬರೆದ ಕವನವಿದು..
ಮಮತೆಯ ಸೊಗಸಿನ ಪಲ್ಲವಿಯು..
ಸುಂದರಾ ಸ್ನೇಹವಿದು.. ಇಂತಾ ಅನುಬಂಧ..
ಎಂತಾ ಆನಂದಾ..
ಇದೆ ನಗುವಾ ಮನದಾ ಸ್ಪಂಧಾ..
ಸವಿ ಸುಂದರಾ ಮಮತೆ ಬಂಧಾ..

Bombe Adsonu - Drama Lyrics


ಚಿತ್ರ : ಡ್ರಾಮಾ (2012)

ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು

ಲೆಕ್ಕಾನು ದೇವರ ಕೈಯಲ್ಲಿ ನಾವೇನ್ ಮಾಡೋಣ
ಎಲ್ಲಾರು ಮುಖಮುಚ್ಕೊಂಡು ಡ್ರಾಮಾ ಆಡಾಣ
ಬೊಂಬೆ ಆಡ್ಸೋನು ಮೇಲೆ ಕುಂತವ್ನು
 ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು

ಇಡ್ಲಿಗೆ ತುದಿ ಯಾವ್ದು ಮುದ್ದೆಗೆ ಬುಡ ಯಾವ್ದು
ಗುಂಡೀಲಿ ಹೆಣ ಯಾವ್ದು ಹುಂಡೀಲಿ ಹಣ ಯಾವ್ದು
ಪ್ರೇಮಕ್ಕೆ ಶ್ರಿಬ್ಬಕ್ಕು ಕಾಮಕ್ಕೆ ರೊಬ್ಬಕ್ಕು
ಜೀವ್ನಾನೇ ಚೌ ಚೌವಾಯ್ತು ಯಾಕೆ ದೂಸ್ರಾ ಮಾತು
ಉಪ್ಪನ್ನು ತಿಂದಮೇಲೆ ಬಿಪಿ ಬರ್ದೆ ಇರ್ತಾದಾ
ಉಪ್ಪಿನಾ ಕಾಯಂತ ಲೈಫ್ನ ತಿಂದೇ ಇರಕಾಯ್ತದಾ
ನಾಲ್ಗೇನೆ ನಮ್ ಕೈಲಿಲ್ಲಾ ನಾವೇನ್ ಮಾಡಾಣಾ
ಅವ್ನು ಬರ್ಕೊಟ್ಟ ಡೈಲಾಗ್ ಹೇಳಿ ಡ್ರಾಮಾ ಆಡೋಣಾ

ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು

ಒಂದೊಂದು ಮುಸುಡೀಲು ನೂರೆಂಟು ಕಲರ್ರು
ಇಲ್ಲೊಬ್ಬ ಸೂಪರ್ರು ಅಲ್ಲೊಬ್ಬ ಲೋಪರ್ರು
ಲೋಕದ ಮೆಟಾಡೋರು ಓಡಿಸುತಾ ದೇವ್ರು
ಸುಸ್ತಾಗಿ ಮಲಗೋವ್ನೆ ಯಾರಪ್ಪ ಎಬ್ಬಸೋರು

ಯಾವಾನ ಬಿಟ್ಟು ಹೋದ ಹಳೇ ಚಪ್ಲಿ ಈ ಬಾಳು
ಹಾಕ್ಕೋಂಡು ಹೋಗು ಮಗನೇ ನಿಲ್ಲಬೇಡ ನೀನೆಲ್ಲೂ
ಭಗವಂತಾ ರೋಡಲ್ಲಿ ಸಿಕ್ರೆ ನಾವೇನ್ ಮಾಡಾಣ
ಅವನೀಗೂ ಬಣ್ಣ ಹಚ್ಚಿ ಡ್ರಾಮಾ ಆಡೋಣಾ

ಬೊಂಬೆ ಆಡ್ಸೋನು ಮೇಲೆ ಕುಂತವ್ನು
 ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು

ದೇಹಾನೆ ಟೆಂಪರ್ವರಿ ನಾವೇನ್ ಮಾಡೋಣ
ಮಣ್ಣಲ್ಲಿ ಹೋಗೋಗಂಟಾ ಡ್ರಾಮಾ ಆಡೋಣ