Saturday, March 2, 2013

Maayadanta male bantanna


ಮಾಯದಂಥ ಮಳೆ ಬಂತಣ್ಣ
ಮದಗಾದ ಕೆರೇಗೆ
ಅಂಗೈನಷ್ಟು ಮೋಡನಾಗಿ
ಭೂಮಿತೂಕದ ಗಾಳಿ ಬೀಸಿ
ಗುಡಗಿ ಗೂಡಾಗಿ ಚೆಲ್ಲಿದಳು
ಗಂಗಮ್ಮ ತಾಯಿ ||
ಏರಿ ಮ್ಯಾಗಳ ಬಲ್ಲಾಳುರಾಯ
ಕೆರೆಯ ಬಳಗರ ಬೆಸ್ತರ ಹುಡುಗ
ನೀವೋಡಿ ಓಡಿ ಸುದ್ದಿಯ ಕೊಡಿರಯ್ಯೋ
ನಾನಿಲುವಳಲ್ಲ
||ಮಾಯದಂತ ಮಳೆ||
ಆರು ಸಾವಿರ ಒಡ್ಡರ ಕರಸಿ
ಮೂರು ಸಾವಿರ ಗುದ್ದಲಿ ತರಸಿ
ಸೋಲು ಸೋಲಿಗೆ ಮಣ್ಣನ್ ಹಾಕಿಸಯ್ಯೋ
ನಾನಿಲುವಳಲ್ಲ
||ಮಾಯದಂತ ಮಳೆ||
ಆರು ಸಾವಿರ ಕುರಿಗಳ ತರಿಸಿ
ಮೂರು ಸಾವಿರ ಕುಡುಕೋಲ್ ತರಿಸಿ
ಕಲ್ಲು ಕಲ್ಲಿಗೆ ರೈತವ ಬಿಡಿಸಯ್ಯೋ
ನಾ ನಿಲುವಳಲ್ಲ
||ಮಾಯದಂತ ಮಳೆ||
ಒಂದು ಬಂಡಿಲಿ ವೀಳೆದೆಡೆಕೆ
ಒಂದು ಬಂಡಿಲಿ ತಿಗಳಿತಮಟಾ
ಮೂಲೆ ಮೂಲೆಗೆ ಗಂಗಮ್ನ ಮಾಡಿಸಯ್ಯೋ
ನಾ ನಿಲುವಳಲ್ಲ
||ಮಾಯದಂತ ಮಳೆ||

No comments:

Post a Comment