Wednesday, December 5, 2012

THUND HYKLA SAHAVASA - DRAMA LYRICS

ಚಿತ್ರ : ಡ್ರಾಮಾ
ಗಾಯಕ : ವಿಜಯ್ ಪ್ರಕಾಶ್
ಸಂಗೀತ : ಹರಿಕೃಷ್ಣ
ಸಾಹಿತ್ಯ &ನಿರ್ದೇಶಕರು : ಯೋಗರಾಜ್ ಭಟ್


ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ
ಲಬಲಬಲಬ ಲಯ್ಯಾಲೆ ಅಲಬಲಬಲ ಬಯ್ಯಾಲೆ

ಹೆಂಗೋ ಮೊನ್ನೆ ತಾನೇ ಪಿಯುಸಿ ಮುಗ್ಸೋರೇ
ಊರ್ಹಾಳು ಮಾಡೋದಕ್ಕೆ ರೀಸರ್ಚ್ ನಡೆಸವ್ರೇ
ಹೆಂಗೇ ಹಾಡಿದರೂ ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಹೆಂಗೇ ಹಾಡಿದರೂ ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಲಬಲಬಲಬ ಲಯ್ಯಾಲೆ ಅಲಬಲಬಲ ಬಯ್ಯಾಲೆ

ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ ಆ ಆ ಆ ಆ ಆ ..
ದಯ್ಯಾರೆ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯ
ದಯ್ಯಾರೆ ದಯ್ಯ ದಯ್ಯ ದಯ್ಯರೇ.....
ದಯ್ಯಾರೆ ದಯ್ಯ ದಯ್ಯ ದಯ್ಯ ದಯ್ಯ ದಯ್ಯ ದಯ್ಯ
ದಯ್ಯಾರೇ
ಇವರು ಕಾಲು ಇಟ್ರು ಅಂದ್ರೆ ಅದೆ ರೋಡು
ಈ ನನ್ಮಕ್ಲಿಗೆ ಬಯೋಡೇಟಾ ಬೇರೆ ಕೇಡು
 ....

ಯೌವನದ ಹೊಳೆಯಲ್ಲಿ ಹಳೆ ಬೋಟು
ಬೋಟಲ್ಲಿ ನೂರಾಎಂಟು ಹಳೆ ತೂತು...
ಬೆಳಗಾಗೆದ್ದು ಬೆಟ್ಟಕ್ಕೆ ಹರಿದಾರ ಕಟ್ಟಿ ಎಳೆದವ್ರೆ
ಓಡುತ್ತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ
ಅನಾಸಿನ್ನು ತಿಂದ್ರು ತಲೆ ನೋಯ್ತವೆ
ಚಿಂತೇಲಿ ಊಟ ಬಿಟ್ರೆ ಗ್ಯಾಸು ಆಯ್ತವೆ
ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ
ದೊಡ್ಡೋರು ಕೊಡೋದಿಲ್ಲ ಪರ್ಮಿಶನ್ನು
ಕಂಪೌಂಡು ಹಾರುತಿದ್ದ ಜನರೇಶನ್ನು
ಜನರೇಶನ್ನೂ...
ಬೇಕಿಲ್ಲಾ ಪ್ರಳಯಕ್ಕೆ ಕಾಯೋದಿನ್ನೂ
ತುಂಡ್ ಹೈಕ್ಳ್ ಮುಳುಗಿಸ್ತಾರೆ ಊರನ್ನು
ಮೀಸೆ ಗೀಸೆ ಬಂದಾಗ ಹಗಲು ರಾತ್ರಿ ರಾದ್ಧಾಂತ
ಬಿಳಿ ಗಡ್ಡ ಬಂದಾಗ ಹೇಳಿದ್ದೆಲ್ಲಾ ವೇದಾಂತ
ಪ್ರತಿ ಎಂಡಿನಲ್ಲೂ ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲ್ಸ ಎಲ್ಲ ಇಂತವೇ


ತುಂಡ್ ಹೈಕ್ಳ ಸಾವಾಸ ಮೂರು ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ

No comments:

Post a Comment